ಮಜಿಬೈಲು ಶಾಲೆಯ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ
ಮೀಯಪದವು: ಮಜಿಬೈಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಮಹಾಸಭೆಯು. ಪಿ.ಟಿ.ಎ. ಅಧ್ಯಕ್ಷರಾದ ಸುಂದರ ಕೊಡ್ಡೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.
ಪಿ,ಟಿ.ಅ. ಅಧ್ಯಕ್ಷೆಯಾಗಿ ಗೀತಾ ಹಾಗೂ ಉಪಾಧ್ಯಕ್ಷೆಯಗಿ ಸುಶೀಲ ಯಂ.ಪಿಟಿ.ಅಧ್ಯಕ್ಷೆಯಾಗಿ ನಿರ್ಮಲ ಮತ್ತು ಉಪಾಧ್ಯಕ್ಷೆಯಾಗಿ ಸುಜಾತರವರನ್ನು ಆರಿಸಲಾಯಿತು.ಈ ಸಂದರ್ಭದಲ್ಲಿ ವಾಚನಾವಾರಾಚಣೆಯ ಅಂಗವಾಗಿ ಏರ್ಪಡಿಸಿದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಮುಖ್ಯ ಶಿಕ್ಷಕರಾಗಿ ಭಡ್ತಿ ಹೊಂದಿದ ನಮ್ಮೀ ಶಾಲೆಯ ಹಿರಿಯ ಶಿಕ್ಷಕರಾದ ಸುರೇಶ ಬಂಗೇರರನ್ನು ಈಸಂದರ್ಭದಲ್ಲಿ ಅಭಿನಂದಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಜೈಶಂಕರ ವಿ.ಜಿ.ಸ್ವಾಗತಿಸಿದರು. ಚಿತ್ರಾವತಿ ಚಿಗುರುಪಾದೆ ವರದಿ ವಾಚಿಸಿದರು.ಶಿಕ್ಷಕಿ ಸೀಮಾಸುವರ್ಣ ವಂದಿಸಿದರು.
No comments:
Post a Comment