ಸಂಭ್ರಮದ ಮಜಿಬೈಲು ಶಾಲಾ ಸುವರ್ಣ ಮಹೋತ್ಸವ
ಮಜಿಬೈಲು : ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಜಿಬೈಲಿನ ಸುವರ್ಣ ಮಹೋತ್ಸವವು ದಿನಾಂಕ 26/01/2023ನೇ ಗುರುವಾರದಂದು ವಿಜೃಂಭಣೆಯಿಂದ ಜರುಗಿತು. ವಾರ್ಡ್ ಸದಸ್ಯೆಯಾದ ಶ್ರೀಮತಿ ಆಶಾಲತಾ ಬಿ.ಎಂ ರವರು ಶಾಲಾ ಧ್ವಜಾರೋಹಣಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಾಲಾ ಮಕ್ಕಳ ಪ್ರಾರ್ಥನೆ ಹಾಗೂ ಸ್ವಾಗತ ನೃತ್ಯದೊಂದಿಗೆ ಆರಂಭಗೊಂಡ ಸಭಾ ಕಾರ್ಯಕ್ರಮವನ್ನು ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಎ.ಕೆ.ಎಂ ಅಶ್ರಫ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಮೀಂಜ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಂದರಿ.ಆರ್. ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಮಂಜೇಶ್ವರ ಬ್ಲೋಕ್ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಮೊಹಮ್ಮದ್ ಹನೀಫ್ ಪಿ.ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.ಮೀಂಜ ಪಂಚಾಯತ್ ವಿದ್ಯಾಭ್ಯಾಸ ಸ್ಥಾಯೀ ಸಮಿತಿಯ ಅಧ್ಯಕ್ಷೆ ಶ್ರೀಮತಿ ಸರಸ್ವತಿ, ಅಭಿವೃದ್ಧಿ ಸ್ಥಾಯೀ ಸಮಿತಿಯ ಅಧ್ಯಕ್ಷೆ ಶ್ರೀಮತಿ ರುಖ್ಯಾ ಸಿದ್ಧೀಕ್, ವಾರ್ಡ್ ಸದಸ್ಯೆ ಶ್ರೀಮತಿ ಆಶಾಲತಾ ಬಿ.ಎಂ , ಮಂಜೇಶ್ವರ ಉಪ ಜಿಲ್ಲಾ ವಿದ್ಯಾಧಿಕಾರಿಗಳಾದ ಶ್ರೀ ದಿನೇಶ ವಿ, ಬ್ಲಾಕ್ ಪ್ರೊಗ್ರಾಮ್ ಕೋಆರ್ಡಿನೇಟರ್ ವಿಜಯಕುಮಾರ್ ಪಿ., ಮಜಿಬೈಲು ವಾರ್ಡಿನ ಮಾಜಿ ಸದಸ್ಯರಾದ ಶ್ರೀ ಶಾಂತರಾಮ ಶೆಟ್ಟಿ , ಮಜಿಬೈಲು ಸರ್ವಿಸ್ ಕೋ -ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಸಂಜೀವ ಶೆಟ್ಟಿ, ನ್ಯಾಯವಾದಿ ಶ್ರೀ ದಾಮೋದರ ಶೆಟ್ಟಿ, ಮಜಿಬೈಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮೊಕ್ತೇಸರರಾದ ಶ್ರೀ ಗೋಪಾಲಕೃಷ್ಣ ನಾವಡ, ಹಿರಿಯರಾದ ಮಜಿಬೈಲು ಕೊಡ್ಡೆಯ ಶ್ರೀ ಗೋಪಾಲಕೃಷ್ಣ ಆಳ್ವ, ಸೈಂಟ್ ಮೈಕಲ್ ವಾರ್ಡಿನ ಗುರಿಕಾರರಾದ ಶ್ರೀ ಫೆಡ್ರಿಕ್ಸ್ ಡಿ ಸೋಜ, ಶ್ರೀ ಅಯ್ಯಪ್ಪ ಭಜನಾ ಮಂದಿರ ಮಜಿಬೈಲಿನ ಅಧ್ಯಕ್ಷರಾದ ಶ್ರೀ ಸಂಜೀವ ಬಂಗೇರ ಮಜಿಬೈಲು, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಹರೀಶ್ ನಾಯಕ್, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ದಿನೇಶ್ ಮಜಿಬೈಲು, SMC ಅಧ್ಯಕ್ಷೆಯಾದ ಶ್ರೀಮತಿ ಆಶಾಲತಾ ಆಳ್ವ, MPTA ಅಧ್ಯಕ್ಷೆ ಶ್ರೀಮತಿ ಪವಿತ್ರ , ನಿವೃತ್ತ ಉಪ ಜಿಲ್ಲಾ ವಿದ್ಯಾಧಿಕಾರಿಗಳಾದ ಶ್ರೀ ಎಂ.ಜಿ ನಾರಾಯಣ ರಾವ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಲಪಾಡಿ ವಲಯದ ಮೇಲ್ವಿಚಾರಕರಾದ ಶ್ರೀ ಭಾಸ್ಕರ್ ಕಾನಾವು ಮೊದಲಾದವರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿಗಾಗಿ ಶ್ರಮಿಸಿದ ಹಿರಿಯರನ್ನು ಹಾಗೂ ವಾರ್ಡ್ ಸದಸ್ಯರನ್ನು ಶಾಸಕರ ಸಮ್ಮುಖದಲ್ಲಿ ಗೌರವಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸುರೇಶ ಬಂಗೇರ ರವರು ಪ್ರಾಸ್ತಾವಿಕ ಭಾಷಣದೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ಶಾಲಾ ಶಿಕ್ಷಕಿ ಶ್ರೀಮತಿ ಅಶ್ವಿನಿ ಶಾಲಾ ವರದಿಯನ್ನು ಮಂಡಿಸಿದರು. ಅಧ್ಯಾಪಕರಾದ ಶ್ರೀ ದೇವಾನಂದ ಕಾಡೂರು ಕಾರ್ಯಕ್ರಮವನ್ನು ನಿರೂಪಿಸಿ ಸಭಾ ಕಾರ್ಯಕ್ರಮಕ್ಕೆ ಧನ್ಯವಾದವಿತ್ತರು.
ತದನಂತರ ಶಾಲಾ ಮಕ್ಕಳಿಂದ, ಹಳೆ ವಿದ್ಯಾರ್ಥಿಗಳಿಂದ ಹಾಗೂ ಊರ ವಿದ್ಯಾಭಿಮಾನಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಶರತ್ ಕೊಡ್ಡೆಯವರ ಸಂಗೀತದೊಂದಿಗಿನ ಚಿತ್ರ ಕಾರ್ಯಕ್ರಮವು ಸುವರ್ಣ ಮಹೋತ್ಸವ ಸಂಭ್ರಮಕ್ಕೆ ಮೆರುಗು ನೀಡಿತು. ಈ ಸಂದರ್ಭದಲ್ಲಿ ಶಾಲಾ ಮಕ್ಕಳು ಅಭಿನಯಿಸಿದ 'ಯೋಧ ' ಎಂಬ ನಾಟಕವು ಎಲ್ಲರ ಮೆಚ್ಚುಗೆಗಳಿಸಿತು. ಶಾಲಾ ಶಿಕ್ಷಕಿ ಶ್ರೀಮತಿ ಮಮತಾ ರವರ ಧನ್ಯವಾದದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಕ್ತಾಯವಾಯಿತು.
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಜಿಬೈಲಿನ ಶಾಲಾ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಮಂಜೇಶ್ವರ ಉಪ ಜಿಲ್ಲಾ ವಿದ್ಯಾಧಿಕಾರಿಗಳಾದ ಶ್ರೀ ದಿನೇಶ್ ವಿ. ಸರ್ ಅವರನ್ನು ಗೌರವಿಸಿದ ಕ್ಷಣ.... |
No comments:
Post a Comment