ಇಂದು ನಮ್ಮ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಜಿಬೈಲಿನಲ್ಲಿ ಶಾಲಾ ಸುವರ್ಣ ಮಹೋತ್ಸವದ ಪ್ರಯುಕ್ತ ಶಾಲಾ ಹಳೆ ವಿದ್ಯಾರ್ಥಿಗಳಿಗೆ,ಹೆತ್ತವರಿಗೆ ಮತ್ತು ಊರವರಿಗೆ ವಿವಿಧ ಆಟೋಟ ಸ್ಪರ್ಧೆಗಳು ವಿಜೃಂಭಣೆಯಿಂದ ಜರಗಿತು. ಮಜಿಬೈಲ್ ವಾರ್ಡ್ ಸದಸ್ಯೆಯಾದ ಶ್ರೀಮತಿ ಆಶಾಲತ ಬಿ.ಎಮ್ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸುಮಾರು ನೂರಕ್ಕಿಂತಲೂ ಹೆಚ್ಚಿನ ಮಂದಿ ಭಾಗವಹಿಸಿದ್ದ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ಎಲ್ಲರಿಗೂ ಶಾಲಾ ಪರವಾಗಿ ನಾವು ಅಭಿನಂದನೆಗಳನ್ನು ಸಲ್ಲಿಸುತ್ತೇವೆ. 26ನೇ ತಾರೀಕಿನಂದು ನಡೆಯುವ ಶಾಲಾ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ನಿಮ್ಮೆಲ್ಲರ ಸಂಪೂರ್ಣ ಸಹಕಾರವನ್ನು ಬಯಸುತ್ತೇವೆ.ಈ ಆಟೋಟ ಸ್ಪರ್ಧೆಯು ಯಶಸ್ವಿಯಾಗಿ ನೆರವೇರಲು ಸಹಕರಿಸಿದ ಎಲ್ಲರಿಗೂ ಶಾಲಾ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.
VIDEO👇
No comments:
Post a Comment