WELCOME TO GLPS MAJIBAIL

6 Oct 2022

ಮಾದಕ ವಸ್ತು ಮುಕ್ತ ಕೇರಳ ಯೋಜನೆ

ಮಾದಕ ವಸ್ತು ಮುಕ್ತ ಕೇರಳ ಯೋಜನೆ 

    ಶಾಲಾಮಟ್ಟದ ವರದಿ 

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಜಿಬೈಲು

   ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಜಿಬೈಲಿನಲ್ಲಿ ಮಾದಕ ವಸ್ತು ಮುಕ್ತ ಕೇರಳ ಎಂಬ ಕಾರ್ಯಕ್ರಮವನ್ನು  ದಿನಾಂಕ 06/102022 ಗುರುವಾರದಂದು ಆಯೋಜಿಸಲಾಯಿತು.ಯುವ ಜನತೆಯನ್ನು ದಾರಿ ತಪ್ಪಿಸುತ್ತಿರುವ ಮಾದಕ ವಸ್ತುಗಳನ್ನು ಕೇರಳದಿಂದ ಮುಕ್ತವಾಗಿಸುವ ಕೇರಳ ಸರಕಾರ ಯೋಜನೆಯಾದ ಮಾದಕ ವಸ್ತು ಮುಕ್ತ ಕೇರಳ ಎಂಬ ಕಾರ್ಯಕ್ರಮಕ್ಕೆ ದಿನಾಂಕ 06/10/2022 ರಂದು  ರಾಜ್ಯಮಟ್ಟದಲ್ಲಿ ಚಾಲನೆ ನೀಡಲಾಯಿತು.ಬೆಳಗ್ಗೆ 10 ಗಂಟೆಗೆ ಕೇರಳದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಪಿಣರಾಯಿ ವಿಜಯನ್ ಅವರು  ಸಮೂಹ ಮಾಧ್ಯಮದ ಮೂಲಕ ಉದ್ಘಾಟಿಸಿದ ಈ ಕಾರ್ಯಕ್ರಮವನ್ನು ಎಲ್ಲ ಮಕ್ಕಳೂ ಹೆತ್ತವರೂ  ವೀಕ್ಷಿಸುವ ವ್ಯವಸ್ಥೆ ಮಾಡಿಕೊಡಲಾಯಿತು. 





ಶಾಲಾ ಮಟ್ಟದ ಈ ಕಾರ್ಯಕ್ರಮದಲ್ಲಿ ನಿವೃತ್ತ ಉಪಜಿಲ್ಲಾ ವಿದ್ಯಾಧಿಕಾರಾಗಳಾದ ಶ್ರೀ ಎಂ.ಜಿ ನಾರಾಯಣರಾವ್ ,ಎಸ್ ಎಂ ಸಿ ಅಧ್ಯಕ್ಷರಾದ ಆಶಾಲತಾ ಆಳ್ವ ,ಎಂ. ಪಿ .ಟಿ ಅಧ್ಯಕ್ಷೆ ಪವಿತ್ರ ಮುಂತಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದಶ್ರೀ ಸುರೇಶ ಬಂಗೇರ ಸರ್ ಅವರು  ಎಲ್ಲಾ ರಕ್ಷಕರಿಗೂ ಈ ಕಾರ್ಯಕ್ರಮದ ಉದ್ದೇಶ ಮತ್ತು 

ಅಗತ್ಯತೆಯನ್ನು ತಿಳಿಸಿದರು. ಎಲ್ಲಾ ರಕ್ಷಕರಿಗೂ ಮಾದಕ ವಸ್ತು ಮುಕ್ತ ಕೇರಳ ಎಂಬ ಕಾರ್ಯಕ್ರಮಕ್ಕೆ ಸಂಬಂಧಿಸಿದ ವೀಡಿಯೋ ತೋರಿಸಲಾಯಿತು.







ಎಲ್ಲಾ ತರಗತಿಗಳಲ್ಲಿ ತರಗತಿ ಸಿ. ಪಿ .ಟಿ.ಎ ನಡೆಸಿ ರಕ್ಷಕರಿಗೆ ಮಕ್ಕಳು ಪಾಲಿಸಬೇಕಾದ ಉತ್ತಮ ಗುಣಗಳು ಉತ್ತಮ ಆರೋಗ್ಯ ಅಭ್ಯಾಸಗಳು ಇತ್ಯಾದಿಗಳ ಕುರಿತು ಕಿವಿ ಮಾತುಗಳನ್ನು ಹೇಳಲಾಯಿತು. ಶಾಲಾ ಶಿಕ್ಷಕಿ ಶ್ರೀಮತಿ ಅಶ್ವಿನಿ ಟೀಚರ್ ಸ್ವಾಗತಿಸಿದ ಈ ಕಾರ್ಯಕ್ರಮವು ಶಾಲಾ ಶಿಕ್ಷಕ ಶ್ರೀ ದೇವಾನಂದ ಅವರು ಧನ್ಯವಾದಗೈಯುವುದರೊಂದಿಗೆ ಮುಕ್ತಾಯವಾಯಿತು.


 

No comments:

Post a Comment