WELCOME TO GLPS MAJIBAIL

8 Nov 2022

ಕೇರಳ ಶಾಲಾ ಪಠ್ಯಕ್ರಮ ಪರಿಷ್ಕರಣೆ----ಸಾರ್ವಜನಿಕ ಚರ್ಚೆ

      ಕೇರಳ ಶಾಲಾ ಪಠ್ಯಕ್ರಮ  ಪರಿಷ್ಕರಣೆ 'ಇದರ ಅಂಗವಾಗಿ ಸಾರ್ವಜನಿಕ ಚರ್ಚೆಯು ದಿನಾಂಕ 08/11/2022 ನೇ ಮಂಗಳವಾರದಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಜಿ ಬೈಲಿನಲ್ಲಿ  ಜರಗಿತು. ಮಜಿ ಬೈಲು ವಾರ್ಡಿನ ಸದಸ್ಯೆ ಶ್ರೀಮತಿ ಆಶಾಲತ ಬಿ.ಎಮ್ , ಎಸ್ ಎಂ. ಸಿ ಅಧ್ಯಕ್ಷೆ ಆಶಾಲತಾ ಆಳ್ವ, ಬಿ ಆರ್ ಸಿ ಯ ಸಿ .ಆರ್. ಸಿ ಕೋ ಆರ್ಡಿನೇಟರ್ ಮೀನಾಕ್ಷಿ ಬೊಡ್ಡೋಡಿ, ಶಾಲಾ ಮುಖ್ಯೋಪಾಧ್ಯಾಯರಾದ  ಶ್ರೀಯುತ ಸುರೇಶ ಬಂಗೇರ ಸರ್  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ರಕ್ಷಕರು ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಶಾಲಾ ಶಿಕ್ಷಕಿ ಶ್ರೀಮತಿ ಅಶ್ವಿನಿ  ಟೀಚರ್ ಎಲ್ಲರನ್ನೂ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಸುರೇಶ್ ಬಂಗೇರ ಸರ್ ರವರು ಕಾರ್ಯಕ್ರಮವನ್ನು ಮುನ್ನಡೆಸಿದರು.












No comments:

Post a Comment