2022-23ನೇ ವರ್ಷದ ಶಾಲಾ ನಿರ್ವಾಹಕ ಸಂಘದ ಮಹಾಸಭೆಯು ತಾರೀಕು 15-07-2022 ನೇ ಶುಕ್ರವಾರದ ಜರಗಿತು. ಎಲ್ಲಾ ರಕ್ಷಕರೂ ಹೆತ್ತವರೂ ಈ ಸಭೆಯಲ್ಲಿ ಭಾಗವಹಿಸಿದ್ದರು.ಶಾಲಾ ಮುಖ್ಯೋಪಾಧ್ಯಯರಾದ ಶ್ರೀಯುತ ಸುರೇಶ ಬಂಗೇರ ಸರ್ ರವರು ಶಾಲೆಯಲ್ಲಿ ನಡೆದ ಭೌತಿಕವಾದ ಅಭಿವೃದ್ಧಿಗಳು, ಶೈಕ್ಷಣಿಕವಾದ ಪ್ರಗತಿ ಮುಂತಾದವುಗಳ ಸಮಗ್ರ ಮಾಹಿತಿಯನ್ನು ಹೆತ್ತವರ ಮುಂದಿಟ್ಟರು. ಮಕ್ಕಳ ಕಲಿಕೆಯಲ್ಲಿ ಆರೋಗ್ಯದಲ್ಲಿ ಮತ್ತು ಇತರ ವಿಷಯಗಳಲ್ಲಿ ಹೆತ್ತವರು ವಹಿಸಬೇಕಾದ ಕಾಳಜಿ ಮುಂಜಾಗ್ರತೆಗಳ ಬಗ್ಗೆ ಶಾಲಾ ಶಿಕ್ಷಕಿ ಮಮತಾ ಟೀಚರ್ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು. ಶಾಲಾ ಶಿಕ್ಷಕ ದೇವಾನಂದ ಸರ್ ರವರು 2021 22 ನೇ ಸಾಲಿನ ಶಾಲಾ ಶೈಕ್ಷಣಿಕ ವರದಿಯನ್ನು ಮಂಡಿಸಿದರು. ಶಾಲಾ ನಿರ್ವಾಹಕ ಸಮಿತಿಯ ಮಾಜಿ ಅಧ್ಯಕ್ಷರು,ಎಂ.ಪಿ.ಟಿ.ಎ ಅಧ್ಯಕ್ಷರು ಮತ್ತು ಇತರ ಪದಾಧಿಕಾರಿಗಳು,ಸಭೆಯಲ್ಲಿ ಉಪಸ್ಥಿತರಿದ್ದರು.
2022-23ನೇ ಸಾಲಿನ ಶಾಲಾ ನಿರ್ವಾಹಕ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಎಲ್ಲರ ಒಮ್ಮತದೊಂದಿಗೆ ಆರಿಸಲಾಯಿತು. ನೂತನ ಶಾಲಾ ನಿರ್ವಾಹಕ ಸಮಿತಿ ಅಧ್ಯಕ್ಷರು:ಶ್ರೀಮತಿ ಆಶಾಲತಾ ಆಳ್ವ ಉಪಾಧ್ಯಕ್ಷರು : ಶ್ರೀಮತಿ ರೆಹಮತ್ ಎಂ.ಪಿ.ಟಿ.ಎ ಅಧ್ಯಕ್ಷರು: ಪವಿತ್ರ ಎಂ.ಪಿ.ಟಿ.ಎ ಉಪಾಧ್ಯಕ್ಷರು : ಮುಮ್ತಾಜ್
No comments:
Post a Comment