ಇಂದು ಜಿ.ಎಲ್.ಪಿ ಶಾಲೆ ಮಜಿಬೈಲಿನಲ್ಲಿ 2022-23ನೇ ವರ್ಷದ ಮೊದಲ ಬಾಲಸಭೆಯು ಜರುಗಿತು. ನಾಲ್ಕನೇ ತರಗತಿಯ ಪ್ರಿನ್ಸಿಯಾ ಡಿ ಸೋಜ ಇಂದಿನ ಬಾಲ ಸಭೆಯನ್ನು ಉದ್ಘಾಟಿಸಿದಳು. ನಾಲ್ಕನೇ ತರಗತಿಯ ಫಾತಿಮಾ ಹೈಫಾ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದಳು .ಮಕ್ಕಳು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಹಾಡು, ಕಥೆ ನಾಟಕ ,ಒಗಟು, ಗಾದೆ, ಅಭಿನಯ ಗೀತೆ, ಮಾಪಿಳ್ಳ ಪಾಟ್ ಹೀಗೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಸಂಭ್ರಮದಿಂದ ಕುಣಿದರು. ಮಕ್ಕಳು ತಾವೇ ಸ್ವತಃ ನಡೆಸಿಕೊಟ್ಟ ಈ ಬಾಲಸಭೆಗೆ ಶಿಕ್ಷಕರೆಲ್ಲರೂ ಸಹಕಾರ ನೀಡಿದರು. ಆಯಿಷತ್ ರಮ್ಲ ನಿರೂಪಿಸಿದ ಈ ಬಾಲಸಭೆಯು ಸನ ಫಾತಿಮಾಳು ಧನ್ಯವಾದಗೈಯುವುದರೊಂದಿಗೆ ಮುಕ್ತಾಯವಾಯಿತು.
No comments:
Post a Comment