22 Dec 2022
ಕ್ರಿಸ್ಮಸ್ ಆಚರಣೆ
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಜಿಬೈಲಿನಲ್ಲಿ ಕ್ರಿಸ್ಮಸ್ ಹಬ್ಬವನ್ನು ಬಹು ವಿಜೃಂಭಣೆಯಿಂದ ಆಚರಿಸಲಾಯಿತು. ಎಲ್ಲ ಮಕ್ಕಳು ಬಹಳ ಸಂತೋಷದಿಂದ ಕುಣಿದು ಕುಪ್ಪಳಿಸಿದರು. ಸಾಂತ ಕ್ಲಾಸನ ವೇಷ ಧರಿಸಿ ಎಲ್ಲಾ ಮಕ್ಕಳಿಗೂ ಸಿಹಿತಿನಿಸುಗಳನ್ನು ವಿತರಿಸಲಾಯಿತು. ನೃತ್ಯ ಮಾಡುವ ಮೂಲಕ ಮಕ್ಕಳು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
1 Dec 2022
30 Nov 2022
28 Nov 2022
ಅಭಿನಯ ತಯಾರಿ
28/11/2022 ಸೋಮವಾರದಂದು ಪುಣ್ಯಕೋಟಿ ಎಂಬ ಹಾಡಿನ ನಾಟಕ ಅಭಿನಯಕ್ಕಾಗಿ ಮುಖವಾಡಗಳನ್ನು ತಯಾರಿಸಿ ಸಜ್ಜಾಗುತ್ತಿರುವ ನಾಲ್ಕನೇ ತರಗತಿಯ ಮಕ್ಕಳು......
IDPD DAY 2022
IDPD DAY 2022(international day of persons with disability) ರ ಅಂಗವಾಗಿ ಇಂದು ನಮ್ಮ ಶಾಲೆಯಲ್ಲಿ ಕಲಿಯುತ್ತಿರುವ ವಿಭಿನ್ನ ಸಾಮರ್ಥ್ಯವಿರುವ ಮೂರನೇ ತರಗತಿಯ ಮಗುವಾದ 'ಸಮರ್ಥ್' ನ ಸಮ್ಮುಖದಲ್ಲಿ ವಿಶೇಷ ಅಸೆಂಬ್ಲಿಯನ್ನು ನಡೆಸಲಾಯಿತು. ವಿಭಿನ್ನ ಸಾಮರ್ಥ್ಯವಿರುವ ಮಕ್ಕಳಿಗೂ ಇತರರಿಗೆ ತೋರುವ ಪ್ರೀತಿಯನ್ನೂ ಕಾಳಜಿಯನ್ನೂ ತೋರಿಸಬೇಕೆಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಸುರೇಶ ಬಂಗೇರ ಸರ್ ಅವರು ತಿಳಿಸಿದರು.
26 Nov 2022
ಶಾಲಾ ಕಲೋತ್ಸವ 2022
2022-23 ನೇ ವರ್ಷದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವವು ಎಸ್.ವಿ.ಎಚ್ ಎಸ್.ಎಸ್ ಮತ್ತು ವಿ.ಎ.ಯು.ಪಿ.ಯಸ್ ಮೀಯಪದವಿನಲ್ಲಿ ಜರುಗಿತು. ದಿನಾಂಕ 22/10 2022 ರಿಂದ ಆರಂಭಿಸಿ 25/10/2022 ರವರೆಗೆ ಸತತ ನಾಲ್ಕು ದಿನಗಳ ಕಾಲ ಬಹು ವಿಜೃಂಭಣೆಯಿಂದ ಮೇಳೈಸಿತು. ನಮ್ಮ ಶಾಲೆಯ ಪುಟಾಣಿಗಳು ಕೂಡ ಕಲೋತ್ಸವದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು. ಜೊತೆಗೆ ಶಾಲೆಗಳಿಗೆ ಉತ್ತಮವಾದ ಅಂಕಗಳನ್ನು ತಂದುಕೊಡುವಲ್ಲಿ ಯಶಸ್ವಿಯಾದರು.
|
23rd PLACE IN LP KANNADA SCHOOLWISE POINT |