ಶಾಲಾ ನಿರ್ವಾಹಕ ಸಮಿತಿ ರೂಪೀಕರಣದ ಮಹಾಸಭೆಯು ಶಾಲಾ ಮುಖ್ಯೋಪಾಧ್ಯಾಯರ ಅದ್ಯಕ್ಷತೆಯಲ್ಲಿ ನಡೆಯಿತು . ನೂತನ ಅಧ್ಯಕ್ಷರಾಗಿ ಗಾಯತ್ರಿ ಹಾಗೂ ಉಪಾಧ್ಯಕ್ಷರಾಗಿ ಫೆಡ್ರಿಕ್ ಡಿ ಸೋಜ ರನ್ನು ಆಯ್ಕೆ ಮಾಡಲಾಯಿತು .
19 Jun 2015
ವಾಚನಾ ಸಪ್ತಾಹ ಉದ್ಘಾಟನಾ ಸಮಾರಂಭ
ಪಿ ಎನ್ ಪಣಿಕ್ಕರ್ ಚರಮ ದಿನದ ಅಂಗವಾಗಿ ನಮ್ಮ ಶಾಲೆಯಲ್ಲಿ ಒಂದು ವಾರ ನಡೆಯಲಿರುವ ವಾಚನಾ ಸಪ್ತಾಹ ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯರು ಶ್ರೀ ಜಯಶಂಕರ್ ರವರು ಉದ್ಘಾಟಿಸಿದರು . ಶಾಲಾ ಮಕ್ಕಳಿಗೆ ಒಂದು ವಾರ ಕಾಲ ಓದುವ ಚಟುವಟಿಕೆ ಗಳೊಂದಿಗೆ ವಿವಿಧ ಸ್ಪರ್ಧೆ ಗಳನ್ನು ನಡೆಸಲು ತೀರ್ಮಾನಿಸಲಾಯಿತು
5 Jun 2015
ವಿಶ್ವ ಪರಿಸರ ದಿನ ಆಚರಣೆ
ಪರಿಸರದಿನದ ಘೋಷಣ ವಾಕ್ಯಗಳ ಮೆರವಣಿಗೆ ಸಾಗುತ್ತಿರುವ ಮಕ್ಕಳು
೨೦೧೫-೧೬ ನೆ ಶೈಕ್ಷಣಿಕ ವರ್ಷದ ಪ್ರವೆಶೋತ್ಸವವು ಸಡಗರದಿಂದ ಜರಗಿತು. ನವಾಗತ ಮಕ್ಕಳಿಗೆ ಪುಗ್ಗೆ ಆಟಿಕೆ ನೀಡಿ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು . ಕಿಟ್ ವಿತರಣೆ ವಾರ್ಡ್ ಮೆಂಬರ್ ಚಂದ್ರಪ್ರಭ ನೆರವೇರಿಸಿದರು .