ಇಂದು ನಮ್ಮ ಶಾಲೆಯಲ್ಲಿ ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ನೇತೃತ್ವದಲ್ಲಿ ಎಲ್ಲಾ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಯಿತು.
27 Jun 2022
21 Jun 2022
ಜೂ21: ಮಜಿಬೈಲಿನಲ್ಲಿ ವಿಶ್ವ ಯೋಗ ದಿನಾಚರಣೆ
ಜೂ21ವಿಶ್ವ ಯೋಗ ದಿನಾಚರಣೆ
ಇಂದು ನಮ್ಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಮಕ್ಕಳಿಗೆ ಯೋಗದ ಮಹತ್ವವನ್ನು ತಿಳಿಸಲಾಯಿತು. ಮಕ್ಕಳಿಗೆ ಸರಳ ಪ್ರಯೋಗಗಳನ್ನು ಹೇಳಿಕೊಡಲಾಯಿತು. ಶಾಲಾ ಶಿಕ್ಷಕಿ ಮಮತಾ ಟೀಚರ್ ಅವರ ನೇತೃತ್ವದಲ್ಲಿ ಮಕ್ಕಳಿಗೆ ಸರಳ ಯೋಗಗಳನ್ನು ತಿಳಿಸಿಕೊಡಲಾಯಿತು. ಯೋಗಗಳ ಮಹತ್ವದ ಕುರಿತದ ವಿಡಿಯೋ ಪ್ರದರ್ಶಿಸಲಾಯಿತು.
20 Jun 2022
ವಾಚನಾ ವಾರಾಚರಣೆ
ವಾಚನಾ ವಾರಾಚರಣೆ
ಪಿ.ಯನ್ ಪಣಿಕ್ಕರ್ ಅವರ ಚರಮ ದಿನದ ಪ್ರಯುಕ್ತ ಜೂನ್ 19ರಿಂದ ಒಂದು ವಾರಗಳ ಕಾಲ ನಮ್ಮ ಶಾಲೆಯಲ್ಲಿ ವಾಚನಾ ವಾರಾಚರಣೆಯನ್ನು ಆಚರಿಸಲಾಯಿತು. ಮಕ್ಕಳೆಲ್ಲರಿಗೂ ಒಂದೊಂದು ಪುಸ್ತಕಗಳನ್ನು ಓದಿ ಓದಿನ ಟಿಪ್ಪಣಿಯನ್ನು ಬರೆಯಲು ಸೂಚಿಸಲಾಯಿತು. ಎಲ್ಲ ಮಕ್ಕಳು ಕೂಡ ಪುಸ್ತಕಗಳನ್ನು ಓದಿ, ಓದಿನ ಟಿಪ್ಪಣಿ ತಯಾರಿಸಿದರು. ಮಕ್ಕಳ ಬರೆದ ಓದಿನ ಟಿಪ್ಪಣಿಗಳನ್ನು ಸೇರಿಸಿ ಪುಸ್ತಕ ತಯಾರಿಸಲಾಯಿತು. ಮಕ್ಕಳಿಗಾಗಿ ತರಗತಿ ಮಟ್ಟದಲ್ಲಿ ಒಗಟು ಸ್ಪರ್ಧೆ, ಗಾದೆ ಸ್ಪರ್ಧೆ ಮತ್ತು ಕಥೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಎಲ್ಲಾ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ನೀಡಲಾಯಿತು.
17 Jun 2022
ವಿಜ್ಞಾನ ಕ್ಲಬ್ ನ ಉದ್ಘಾಟನೆ
ವಿಜ್ಞಾನ ಕ್ಲಬ್ ನ ಕನ್ವೀನರ್ ಮತ್ತು ಸದಸ್ಯರುಗಳು |
Third Prize winner Moideen Rifan and Azmina |
ಹುಟ್ಟುಹಬ್ಬದ ಉಡುಗೊರೆ
ತರಗತಿ ಲೈಬ್ರರಿಗೆ ಒಂದು ಇಂಗ್ಲೀಷ್ ಕಥೆ ಪುಸ್ತಕವನ್ನು ನೀಡುವುದರ ಮೂಲಕ ತನ್ನ ಹುಟ್ಟುಹಬ್ಬವನ್ನು ವಿಶೇಷ ರೀತಿಯಿಂದ ಆಚರಿಸಿದ ನಾಲ್ಕನೇ ತರಗತಿಯ ವಿದ್ಯಾರ್ಥಿ ಹಸನ್ ಅರ್ಫಾಝ್
14 Jun 2022
ಪಾಯಸದೂಟ
ಮಾಜಿ ಪಿ.ಟಿ.ಎ ಅಧ್ಯಕ್ಷೆ ಯಶೋಧ ಮತ್ತು ಮನೆಯವರು ತಮ್ಮ ಗೃಹಪ್ರವೇಶದ ನಿಮಿತ್ತ ಶಾಲಾ ಮಕ್ಕಳಿಗೆ ಪಾಯಸದೂಟವನ್ನು ಇಂದು ವಿತರಿಸಿದರು.
9 Jun 2022
4 Jun 2022
ವಿಶ್ವ ಪರಿಸರ ದಿನಾಚರಣೆ
ನಮ್ಮ ಜಿ.ಎಲ್.ಪಿ ಶಾಲೆ ಮಜಿಬೈಲಿನಲ್ಲಿ ಜೂನ್ 5ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.ಜೂನ್ 5 ಭಾನುವಾರ ಆದ ಕಾರಣ ನಮ್ಮ ಪುಟಾಣಿಗಳೆಲ್ಲರೂ ತಮ್ಮ ತಮ್ಮ ಮನೆಯಲ್ಲಿ ಗಿಡ ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಿದರು. ಜೊತೆಗೆ ಜೂನ್ 5 ತಾರೀಕಿನಂದು ಶಾಲೆಯಲ್ಲಿ ಎಲ್ಲಾ ಮಕ್ಕಳು ಒಂದೊಂದು ಗಿಡವನ್ನು ತಂದು ಗಿಡ ನೆಟ್ಟು ಪರಿಸರಕ್ಕೆ ತಮ್ಮದೇ ಆದ ಕೊಡುಗೆ ನೀಡಿದರು.
2 Jun 2022
ಮೀಂಜ ಪಂಚಾಯತ್ ಮಟ್ಟದ ಶಾಲಾ ಪ್ರವೇಶೋತ್ಸವ
ಮೀಂಜ ಪಂಚಾಯತ್ ಮಟ್ಟದ ಶಾಲಾ ಪ್ರವೇಶೋತ್ಸವ
2022-23 ನೇ ಶೈಕ್ಷಣಿಕ ವರ್ಷದ ಮೀಂಜ ಪಂಚಾಯತ್ ಮಟ್ಟದ ಶಾಲಾ ಪ್ರವೇಶೋತ್ಸವವು ಜಿ. ಎಲ್. ಪಿ
ಶಾಲೆ ಮಜಿಬೈಲಿನಲ್ಲಿ ಜೂನ್ 1 ರಂದು ಜರಗಿತು. ಪಂಚಾಯತ್ ಮಟ್ಟದ ಶಾಲಾ ಪ್ರವೇಶೋತ್ಸವದ ಪ್ರಯುಕ್ತ
ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.ಎಲ್ಲಾ ಹೆತ್ತವರು,ಊರಿನವರು ಮತ್ತು ಸಂಘ
ಸಂಸ್ಥೆಯವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬೆಳಿಗ್ಗೆ 10:00 ಗಂಟೆಗೆ ಎಲ್ಲಾ ಮಕ್ಕಳಿಗೂ
ರಾಜ್ಯಮಟ್ಟದ ಶಾಲಾ ಪ್ರವೇಶ ಕಾರ್ಯಕ್ರಮವನ್ನು ಕೈಟ್ ವಿಕ್ಚರ್ಸ್ ಚಾನೆಲ್ ನಲ್ಲಿ ತೋರಿಸಲಾಯಿತು.
ಆ ಬಳಿಕ ಮಕ್ಕಳು ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಎಲ್ಲರ ಮನರಂಜಿಸಿದರು.
ಬಳಿಕ ನವಾಗತ ಮಕ್ಕಳನ್ನು ಅದ್ದೂರಿಯಿಂದ ಶಾಲೆಗೆ ಸ್ವಾಗತಿಸಲಾಯಿತು. ವಾರ್ಡ್ ಮೆಂಬರ್,ಆಶಾಲತಾ
ಬಿ.ಯಂ,ಮೀಂಜ ಪಂಚಾಯತು ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ಹಾಗೂ ಹಲವು ಮಂದಿ ವಾರ್ಡ್ ಮೆಂಬರ್ ಗಳು
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಾಲಾ ಪ್ರವೇಶೋತ್ಸವದ ನಂತರ ಸಭಾ ಕಾರ್ಯಕ್ರಮ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯರಾದ
ಶ್ರೀಯುತ ಸುರೇಶ್ ಬಂಗೇರ ಸರ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ವಾರ್ಡ್ ಮೆಂಬರ್ ಆಶಾಲತ ಬಿ.ಎಂ
ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ಅವರು
ದೀಪ ಬೆಳಗಿಸಿ ಉದ್ಘಾಟಿಸಿದರು.ಮೀಂಜ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಂದರಿ ಆರ್ ಶೆಟ್ಟಿ ,ಮಂಜೇಶ್ವರ
ಬ್ಲಾಕ್ ಪಂಚಾಯಿತಿನ ಉಪಾಧ್ಯಕ್ಷರಾದ ಶ್ರೀಯುತ ಅಬ್ದುಲ್ ಹನೀಫ್ ಮಜಿಬೈಲ್ ವಾರ್ಡ್ ಸದಸ್ಯೆ ಶ್ರೀಮತಿ
ಆಶಾಲತ ಬಿ.ಎಂ ,ಮೀಂಜ ಪಂಚಾಯತಿನ ಹಲವು ವಾರ್ಡ್ ಮೆಂಬರ್ ಗಳು, ಅದೇ ರೀತಿ ಮೀಂಜ
ಪಿ.ಇ.ಸಿ ಸೆಕ್ರೆಟರಿ ಶ್ರೀ ಸತ್ಯನಾರಾಯಣ ಶರ್ಮ ಸೇರಿದಂತೆ ಹಲವು ಮಂದಿ ಗಣ್ಯರ ಉಪಸ್ಥಿತಿಯಿಂದ
ಸಭಾ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು. ಎಲ್ಲರೂ ಕಾರ್ಯಕ್ರಮಕ್ಕೆ ಹೃದಯ ತುಂಬಿದ
ಅಭಿನಂದನೆಗಳನ್ನು ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನವಾಗತ ಮಕ್ಕಳಿಗೆ ಊರಿನ ಹಲವಾರು ದಾನಿಗಳು ಉಚಿತವಾಗಿ ವಿದ್ಯಾಭ್ಯಾಸ ಕಿಟ್
ನೀಡಿದರು.ಮಜಿಬೈಲ್ ಸರ್ವಿಸ್ ಕೋ-ಅಪರೇಟಿವ್ ಬ್ಯಾಂಕಿನ ವತಿಯಿಂದ ಎಲ್ಲಾ ನವಾಗತ ಮಕ್ಕಳಿಗೆ ಬ್ಯಾಗನ್ನು
ಮತ್ತು ಶ್ರೀ ರಾಜೇಶ್ ಮಜಿಬೈಲ್, ಶ್ರೀ ದಯಾನಂದ ಮಜಿಬೈಲ್, ಆಲಿ ಮಜಿಬೈಲ್, ಕಾಂಟ್ರಾಕ್ಟರ್ ಮೂಸ
ಖಲೀಮ್ ಎಂಬೀ ಮಹನೀಯರು ಮಕ್ಕಳ ವಿದ್ಯಾಭ್ಯಾಸ ಅನುಕೂಲವಾಗುವ ಪುಸ್ತಕ ಪೆನ್ನು ,ಪೆನ್ಸಿಲ್ ಮತ್ತು
ಇನ್ನಿತರ ವಸ್ತುಗಳನ್ನೊಳಗೊಂಡ ಕಿಟ್ ಗಳನ್ನು ಎಲ್ಲಾ ಮಕ್ಕಳಿಗೂ ಉಚಿತವಾಗಿ ನೀಡಿದರು.
ಮಜಿಬೈಲ್ ಸರ್ವಿಸ್ ಕೋ-ಅಪರೇಟಿವ್ ಬ್ಯಾಂಕಿನ ಬ್ಯಾಂಕ ವತಿಯಿಂದ ಎಲ್ಲಾ ಮಕ್ಕಳಿಗೂ ಸಿಹಿತಿಂಡಿ
ಮತ್ತು ಮಜಿಬೈಲ್ ವಾರ್ಡ್ ಸದಸ್ಯೆ ಶ್ರೀಮತಿ ಆಶಾಲತ ಬಿ.ಎಂ ಅವರ ವತಿಯಿಂದ ಪಾಯಸವನ್ನು
ನೀಡಲಾಯಿತು.ಅದೇರೀತಿ ಬಂದಿರುವ ಎಲ್ಲಾ ಮಕ್ಕಳಿಗೂ ಗಣ್ಯರಿಗೂ ಹೆತ್ತವರಿಗೂ ಊರಿನವರಿಗೂ
ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಸುರೇಶ್ ಬಂಗೇರ ಸರ್ ರವರ ನೇತೃತ್ವದಲ್ಲಿ ಶಾಲಾ
ಅಧ್ಯಾಪಿಕೆಯರಾದ ಮಮತಾ ಟೀಚರ್, ಅಶ್ವಿನಿ ಟೀಚರ್ ಅವರ ಸಹಕಾರದೊಂದಿಗೆ ಅಧ್ಯಾಪಕ ದೇವಾನಂದ
ಕಾಡೂರು ಅವರು ನಿರೂಪಿಸಿದ ಈ ಕಾರ್ಯಕ್ರಮವು ಬಿ.ಆರ್.ಸಿಯ ಸಿ.ಆರ್. ಸಿ ಕೋರ್ಡಿನೇಟರ್ ಮೋಹಿನಿ
ಟೀಚರ್ ಅವರ ಧನ್ಯವಾದದೊಂದಿಗೆ ಮುಕ್ತಾಯವಾಯಿತು.