ಮಕ್ಕಳ ದಿನಾಚರಣೆಯನ್ನು ನಮ್ಮ ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಸಲಾಯಿತು ಮಕ್ಕಳಿಗೆ ಛದ್ಮವೇಷ ಸ್ಪರ್ಧೆ ಯನ್ನು ನಡೆಸಲಾಯಿತು ಶಾಲಾ ನಿರ್ವಾಹಕ ಸಮಿತಿ ಕನ್ವಿ ನರ್ ಉಪಸ್ಥಿತ ರಿದ್ದರು ಶಾಲಾ ಮುಖ್ಯ ಶಿಕ್ಷಕ ಜಯಶಂಕರ್ ಮಕ್ಕಳ ದಿನಾಚರಣೆಯ ಮಹತ್ವ ವಿವರಿಸಿದರು
2 Oct 2015
ಗಾಂಧಿ ಜಯಂತಿ ಆಚರಣೆ
ಗಾಂಧಿ ಜಯಂತಿ ಆಚರಣೆ ನಮ್ಮ ಶಾಲೆ ಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು
ವಾರ್ಡ್ ಸದಸ್ಯೆ ಶ್ರೀಮತಿ ಚಂದ್ರಪ್ರಭ ಧ್ವಜಾರೋಹಣ ನಡೆಸಿದರು ವಿವಿಧ ಸಂಘಗಳ ಸದಸ್ಯರು ಹಾಜರಿದ್ದು ಮಕ್ಕಳಿಗೆ ಉಡುಗೊರೆಯನ್ನು ನೀಡಿದರು ಮಕ್ಕಳಿಗೆ ಬಹುಮಾನ ನೀಡಲಾಯಿತು ಮಕ್ಕಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರಗಿತು
9 Aug 2015
ಹಿರೋಷಿಮಾ ದಿನ ಮತ್ತು ನಾಗಸಾಕಿ ದಿನ ಆಚರಣೆ
ಈ ದಿನಗಳಂದು ಮಕ್ಕಳಿಗೆ ಹಿರೋಷಿಮಾ ಮತ್ತು ನಾಗಸಾಕಿ ಪಟ್ಟಣ ಗಳ ಮೇಲೆ ಅಮೇರಿಕ ನಡೆಸಿದ ಅಣುಬಾಂಬ್ ಧಾಳಿಯ ಕುರಿತು ವಿಡಿಯೋ ತುಣುಕುಗಳನ್ನು ತೋರಿಸಿ ಯುದ್ದ ವಿರೋಧಿ ಘೋಷಣೆಗಳನ್ನು ಹೇಳಿ ಸಲಾಯಿತು
ಡಾ ।ಎ . ಪಿ . ಜೆ ಅಬ್ದುಲ್ ಕಲಾಂ ಅವರಿಗೆ ಭಾವನಮನ .......
15 Jul 2015
ಶಾಲಾ ಪಾರ್ಲಿಮೆಂಟ್ ಚುನಾವಣೆ ೨೦೧೫-೧೬
10 Jul 2015
ಉಚಿತ ಸಮವಸ್ತ್ರ ವಿತರಣಾ ಸಮಾರ೦ಭ
ಉಚಿತ ಸಮವಸ್ತ್ರ ವಿತರಣಾ ಸಮಾರ೦ಭದಲ್ಲಿ ವಾರ್ಡ್ ಸದಸ್ಯೆ ಶ್ರೀಮತಿ ಚಂದ್ರಪ್ರಭ ಹಾಜರಿದ್ದು ಕಾರ್ಯಕ್ರಮವನ್ನು ನಡೆಸಿಕೊಟ್ಟರು
26 Jun 2015
ಶಾಲಾ ನಿರ್ವಾಹಕ ಸಮಿತಿ ಮಹಾಸಭೆ
ಶಾಲಾ ನಿರ್ವಾಹಕ ಸಮಿತಿ ರೂಪೀಕರಣದ ಮಹಾಸಭೆಯು ಶಾಲಾ ಮುಖ್ಯೋಪಾಧ್ಯಾಯರ ಅದ್ಯಕ್ಷತೆಯಲ್ಲಿ ನಡೆಯಿತು . ನೂತನ ಅಧ್ಯಕ್ಷರಾಗಿ ಗಾಯತ್ರಿ ಹಾಗೂ ಉಪಾಧ್ಯಕ್ಷರಾಗಿ ಫೆಡ್ರಿಕ್ ಡಿ ಸೋಜ ರನ್ನು ಆಯ್ಕೆ ಮಾಡಲಾಯಿತು .
19 Jun 2015
ವಾಚನಾ ಸಪ್ತಾಹ ಉದ್ಘಾಟನಾ ಸಮಾರಂಭ
ಪಿ ಎನ್ ಪಣಿಕ್ಕರ್ ಚರಮ ದಿನದ ಅಂಗವಾಗಿ ನಮ್ಮ ಶಾಲೆಯಲ್ಲಿ ಒಂದು ವಾರ ನಡೆಯಲಿರುವ ವಾಚನಾ ಸಪ್ತಾಹ ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯರು ಶ್ರೀ ಜಯಶಂಕರ್ ರವರು ಉದ್ಘಾಟಿಸಿದರು . ಶಾಲಾ ಮಕ್ಕಳಿಗೆ ಒಂದು ವಾರ ಕಾಲ ಓದುವ ಚಟುವಟಿಕೆ ಗಳೊಂದಿಗೆ ವಿವಿಧ ಸ್ಪರ್ಧೆ ಗಳನ್ನು ನಡೆಸಲು ತೀರ್ಮಾನಿಸಲಾಯಿತು
5 Jun 2015
ವಿಶ್ವ ಪರಿಸರ ದಿನ ಆಚರಣೆ
ಪರಿಸರದಿನದ ಘೋಷಣ ವಾಕ್ಯಗಳ ಮೆರವಣಿಗೆ ಸಾಗುತ್ತಿರುವ ಮಕ್ಕಳು
೨೦೧೫-೧೬ ನೆ ಶೈಕ್ಷಣಿಕ ವರ್ಷದ ಪ್ರವೆಶೋತ್ಸವವು ಸಡಗರದಿಂದ ಜರಗಿತು. ನವಾಗತ ಮಕ್ಕಳಿಗೆ ಪುಗ್ಗೆ ಆಟಿಕೆ ನೀಡಿ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು . ಕಿಟ್ ವಿತರಣೆ ವಾರ್ಡ್ ಮೆಂಬರ್ ಚಂದ್ರಪ್ರಭ ನೆರವೇರಿಸಿದರು .