WELCOME TO GLPS MAJIBAIL

22 Jul 2022

English club inauguration

 English club inauguration @Glps majibail.  Inaugurated by our HM Suresha bangera sir and activities conducted by Ashwini teacher.


English club convenor and joint convenors   
Mohamned fasil (convenor)     Likhitha.s ( joint convenor)21 Jul 2022

ಸಹಕಾರ

 ಇಂದು 22/07/2022ನೇ ಶುಕ್ರವಾರ ಮಧ್ಯಾಹ್ನದ ಊಟಕ್ಕೆ ತೆಂಗಿನಕಾಯಿಗಳನ್ನು ನೀಡಿ ಸಹಕರಿಸಿದ  ಎರಡನೇ ತರಗತಿಯ ಆಯಿಷ ಮುನವರ,  ಮೊಯ್ದೀನ್ ಶುಹೈದ್ ಮತ್ತು ನಾಲ್ಕನೇ ತರಗತಿಯ ಶಮ್ನ ಫಾತಿಮಾಳಿಗೆ ಧನ್ಯವಾದಗಳು. ಸಹಕರಿಸಿದ ಮಕ್ಕಳ ಹೆತ್ತವರಿಗೂ ಶಾಲಾ ಪರವಾಗಿ ಧನ್ಯವಾದಗಳು.

ಗಣಿತ ಕ್ಲಬ್ ಉದ್ಘಾಟನೆ

 ಇಂದು ನಮ್ಮ ಶಾಲೆಯಲ್ಲಿ ಗಣಿತ ಕ್ಲಬ್ ಉದ್ಘಾಟಿಸಲಾಯಿತು.ಮುಖ್ಯೋಪಾಧ್ಯಾಯರಾದ ಶ್ರೀ ಸುರೇಶ ಬಂಗೇರ ಸರ್ ಅವರು ಗಣಿತ  ಮತ್ತು ಗಣಿತ ಕ್ಲಬ್ಬಿನ ಮಹತ್ವದ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು. ಮಮತ ಟೀಚರ್ ಅವರು ಮಕ್ಕಳಲ್ಲಿ ಗಣಿತದ ಚಟುವಟಿಕೆಯನ್ನು ಮಾಡಿಸಿದರು.                                        *
ಗಣಿತ ಕಬ್ಬಿನ ಕನ್ವೀನರ್ ಆಗಿ ನಾಲ್ಕನೇ ತರಗತಿಯ ಹಸನ್ ಅರ್ಫಾಜ್  ಮತ್ತು ಉಪಕನ್ವೀನರ್ ಆಗಿ ಶಮ್ನ ಫಾತಿಮಾ  ಆಯ್ಕೆಗೊಂಡರು.*

ಚಾಂದ್ರ ದಿನ ರಸಪ್ರಶ್ನೆ

 ಇಂದು ಚಾಂದ್ರ ದಿನದ ಪ್ರಯುಕ್ತ ನಡೆಸಿದ ರಸಪ್ರಶ್ನೆಯಲ್ಲಿ ವಿಜೇತರಾದವರು.    ನಾಲ್ಕನೇ ತರಗತಿಯಲ್ಲಿ ನಡೆದ ಚಾಂದ್ರದಿನ ರಸಪ್ರಶ್ನೆ   ಸ್ಪರ್ಧೆ     ಯಲ್ಲಿ  ವಿಜೇತರಾದವರು.

ಎರಡನೇ ತರಗತಿಯಲ್ಲಿ ನಡೆದ ಚಾಂದ್ರದಿನ ರಸಪ್ರಶ್ನೆ   ಸ್ಪರ್ಧೆ ಯಲ್ಲಿ ವಿಜೇತರಾದವರು.
Diyaan first prize
Thanvith second prize ಪಡೆದಿರುತ್ತಾರೆ🌹🌹🌹ಇಂದು ಚಾಂದ್ರದಿನದ ಪ್ರಯುಕ್ತ ನಡೆದ ರಸಪ್ರಶ್ನೆಯಲ್ಲಿ ಮೂರನೇ ತರಗತಿಯಲ್ಲಿ ವಿಜೇತರಾದವರು.
First prize .shubhith
Second prize. Moideen Rifan💐💐💐           

19 Jul 2022

ಶಾಲಾ ಪಾರ್ಲಿಮೆಂಟ್ ಚುನಾವಣೆ

 ಜಿ. ಎಲ್.ಪಿ ಶಾಲೆ ಮಜಿಬೈಲಿನಲ್ಲಿ 19-07-2022ನೇ ಮಂಗಳವಾರದಂದು ಶಾಲಾ ಪಾರ್ಲಿಮೆಂಟ್ ಚುನಾವಣೆ ನಡೆಯಿತು. ಪೌರ ಮತದಾನದ ಎಲ್ಲಾ ಹಂತಗಳನ್ನು ಪರಿಚಯಿಸುವ ರೀತಿಯಲ್ಲಿ ಶಾಲಾ ಪಾರ್ಲಿಮೆಂಟ್ ಚುನಾವಣೆ ನಡೆಯಿತು. ನಿನ್ನೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಮೂರನೇ ತರಗತಿಯ ಮೊಹಮ್ಮದ್ ರಿಫಾನ್ ,ನಾಲ್ಕನೇ ತರಗತಿಯ ಆಯಿಷತ್ ರಮ್ಲ, ಮೊಹಮ್ಮದ್ ಫಾಸಿಲ್, ಹಸನ್ ಅರ್ಫಾಝ್, ಪ್ರಿನ್ಸಿಯಾ ಡಿ ಸೋಜ ಶಾಲಾ ಪಾರ್ಲಿಮೆಂಟ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ಎಲ್ಲಾ ಅಭ್ಯರ್ಥಿಗಳು ಪ್ರತೀ ತರಗತಿಗೂ ಭೇಟಿ ನೀಡಿ ಮತಯಾಚಿಸಿದರು.

ಶಾಲಾ ಪಾರ್ಲಿಮೆಂಟ್ ಚುನಾವಣಾ ಫಲಿತಾಂಶ

ಶಾಲಾ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳುಇಂದು ನಡೆದ ಶಾಲಾ ಪಾರ್ಲಿಮೆಂಟ್ ಚುನಾವಣೆಯಲ್ಲಿ ವಿಜಯಿಯಾದವರು: ಶಾಲಾ ನಾಯಕಿ. : ಪ್ರಿ ನ್ಸಿಯಾ ಡಿ ಸೋಜ ಆರೋಗ್ಯ ಮಂತ್ರಿ : ಆಯಿಷತ್ ರಮ್ಲ ಕ್ರೀಡಾ ಮಂತ್ರಿ : ಹಸನ್ ಅರ್ಫಾಝ್ ಶಾಲಾ ಶಿಸ್ತು ಮಂತ್ರಿ. : ಮೊಹಮ್ಮದ್ ಫಾಸಿಲ್ ಕ್ಲಬ್ ಚಟುವಟಿಗಳ ಮಂತ್ರಿ: ಮೊಹಮ್ಮದ್ ರಿಫಾನ್ _🎉🎉Congratulations to winners_ 🎉🎉
15 Jul 2022

ಶಾಲಾ ನಿರ್ವಾಹಕ ಸಂಘದ ಮಹಾಸಭೆ

 2022-23ನೇ ವರ್ಷದ ಶಾಲಾ ನಿರ್ವಾಹಕ ಸಂಘದ ಮಹಾಸಭೆಯು ತಾರೀಕು 15-07-2022 ನೇ ಶುಕ್ರವಾರದ ಜರಗಿತು. ಎಲ್ಲಾ ರಕ್ಷಕರೂ ಹೆತ್ತವರೂ ಈ ಸಭೆಯಲ್ಲಿ ಭಾಗವಹಿಸಿದ್ದರು.ಶಾಲಾ ಮುಖ್ಯೋಪಾಧ್ಯಯರಾದ ಶ್ರೀಯುತ ಸುರೇಶ ಬಂಗೇರ ಸರ್ ರವರು ಶಾಲೆಯಲ್ಲಿ ನಡೆದ ಭೌತಿಕವಾದ ಅಭಿವೃದ್ಧಿಗಳು, ಶೈಕ್ಷಣಿಕವಾದ ಪ್ರಗತಿ ಮುಂತಾದವುಗಳ ಸಮಗ್ರ ಮಾಹಿತಿಯನ್ನು ಹೆತ್ತವರ ಮುಂದಿಟ್ಟರು. ಮಕ್ಕಳ ಕಲಿಕೆಯಲ್ಲಿ ಆರೋಗ್ಯದಲ್ಲಿ ಮತ್ತು ಇತರ ವಿಷಯಗಳಲ್ಲಿ ಹೆತ್ತವರು ವಹಿಸಬೇಕಾದ ಕಾಳಜಿ ಮುಂಜಾಗ್ರತೆಗಳ ಬಗ್ಗೆ ಶಾಲಾ ಶಿಕ್ಷಕಿ ಮಮತಾ ಟೀಚರ್ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು. ಶಾಲಾ ಶಿಕ್ಷಕ ದೇವಾನಂದ ಸರ್ ರವರು 2021 22 ನೇ ಸಾಲಿನ ಶಾಲಾ ಶೈಕ್ಷಣಿಕ ವರದಿಯನ್ನು ಮಂಡಿಸಿದರು. ಶಾಲಾ ನಿರ್ವಾಹಕ ಸಮಿತಿಯ ಮಾಜಿ ಅಧ್ಯಕ್ಷರು,ಎಂ.ಪಿ.ಟಿ.ಎ ಅಧ್ಯಕ್ಷರು ಮತ್ತು ಇತರ ಪದಾಧಿಕಾರಿಗಳು,ಸಭೆಯಲ್ಲಿ ಉಪಸ್ಥಿತರಿದ್ದರು.

2022-23ನೇ ಸಾಲಿನ ಶಾಲಾ ನಿರ್ವಾಹಕ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಎಲ್ಲರ ಒಮ್ಮತದೊಂದಿಗೆ ಆರಿಸಲಾಯಿತು. ನೂತನ ಶಾಲಾ ನಿರ್ವಾಹಕ ಸಮಿತಿ ಅಧ್ಯಕ್ಷರು:ಶ್ರೀಮತಿ ಆಶಾಲತಾ ಆಳ್ವ ಉಪಾಧ್ಯಕ್ಷರು : ಶ್ರೀಮತಿ ರೆಹಮತ್ ಎಂ.ಪಿ.ಟಿ.ಎ ಅಧ್ಯಕ್ಷರು: ಪವಿತ್ರ ಎಂ.ಪಿ.ಟಿ.ಎ ಉಪಾಧ್ಯಕ್ಷರು : ಮುಮ್ತಾಜ್4 Jul 2022

ಬಾಲಸಭೆ

ಇಂದು ಜಿ.ಎಲ್.ಪಿ ಶಾಲೆ ಮಜಿಬೈಲಿನಲ್ಲಿ 2022-23ನೇ ವರ್ಷದ ಮೊದಲ ಬಾಲಸಭೆಯು ಜರುಗಿತು. ನಾಲ್ಕನೇ ತರಗತಿಯ ಪ್ರಿನ್ಸಿಯಾ ಡಿ ಸೋಜ ಇಂದಿನ ಬಾಲ ಸಭೆಯನ್ನು ಉದ್ಘಾಟಿಸಿದಳು. ನಾಲ್ಕನೇ ತರಗತಿಯ ಫಾತಿಮಾ ಹೈಫಾ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದಳು .ಮಕ್ಕಳು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಹಾಡು, ಕಥೆ ನಾಟಕ ,ಒಗಟು, ಗಾದೆ, ಅಭಿನಯ ಗೀತೆ, ಮಾಪಿಳ್ಳ ಪಾಟ್ ಹೀಗೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಸಂಭ್ರಮದಿಂದ ಕುಣಿದರು. ಮಕ್ಕಳು ತಾವೇ ಸ್ವತಃ ನಡೆಸಿಕೊಟ್ಟ ಈ ಬಾಲಸಭೆಗೆ ಶಿಕ್ಷಕರೆಲ್ಲರೂ ಸಹಕಾರ ನೀಡಿದರು. ಆಯಿಷತ್ ರಮ್ಲ ನಿರೂಪಿಸಿದ ಈ ಬಾಲಸಭೆಯು ಸನ ಫಾತಿಮಾಳು ಧನ್ಯವಾದಗೈಯುವುದರೊಂದಿಗೆ ಮುಕ್ತಾಯವಾಯಿತು.
ವೀಡಿಯೊ👇👇ಹುಟ್ಟುಹಬ್ಬದ ಉಡುಗೊರೆ

 ತಾರೀಕು 02/07/2022 ಶನಿವಾರದಂದು ತನ್ನ ಹುಟ್ಟುಹಬ್ಬವನ್ನು ಆಚರಿಸಿದ 4ನೇ ತರಗತಿಯ ಪ್ರಿನ್ಸಿಯಾ ಡಿ 'ಸೋಜ ಳು ಇಂದು ಎಲ್ಲರಿಗೂ ಸಿಹಿತಿಂಡಿ ಹಂಚುವುದರ ಮೂಲಕ ಸಂಭ್ರಮಿಸಿದಳು. ಅದೇ ರೀತಿ ತನ್ನ ಹುಟ್ಟುಹಬ್ಬದ ಪ್ರಯುಕ್ತ ನಮ್ಮ ಶಾಲೆಯ ಲೈಬ್ರರಿಗೆ 'ಗಾದೆಗಳು ' ಎಂಬ ಪುಸ್ತಕವನ್ನು ನೀಡಿ ಖುಷಿಪಟ್ಟಳು.