WELCOME TO GLPS MAJIBAIL

9 Feb 2023

ಸುವರ್ಣ ಮಹೋತ್ಸವದ ಅವಲೋಕನ ಮತ್ತು ಲೆಕ್ಕಪತ್ರ ಮಂಡನಾ ಸಭೆ

 


ನಮ್ಮ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಜಿಬೈಲಿನಲ್ಲಿ ತಾರೀಕು 26.01.2023ನೇ ಗುರುವಾರದಂದು ಬಹಳ ವಿಜೃಂಭಣೆಯಿಂದ ನಡೆದ ಶಾಲಾ ಸುವರ್ಣ ಮಹೋತ್ಸವದ ಕುರಿತಾದ ಅವಲೋಕನ ಮತ್ತು ಲೆಕ್ಕಪತ್ರ ಮಂಡನಾ ಸಭೆಯನ್ನು ನಡೆಸಲಾಯಿತು. ಮಜಿಬೈಲು ವಾರ್ಡಿನ ಸದಸ್ಯೆ ಶ್ರೀಮತಿ ಆಶಾಲತಾ ಬಿ ಎಂ,  ಶಾಲಾ ನಿರ್ವಾಹಕ ಸಮಿತಿಯ ಅಧ್ಯಕ್ಷೆ ಶ್ರೀಮತಿ ಆಶಾಲತಾ ಆಳ್ವ , ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶ್ರೀ ದಿನೇಶ್ ಮಜಿಬೈಲು, ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಪವಿತ್ರ,  ಜೊತೆಗೆ ರಕ್ಷಕರು ಹಾಗೂ ಊರವರು ಈ ಸಭೆಯಲ್ಲಿ ಭಾಗವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸುರೇಶ ಬಂಗೇರ  ಅವರು ಸ್ವರ್ಣ ಮಹೋತ್ಸವದ ವಿಜೃಂಭಣೆಯ ವಿಜಯಕ್ಕೆ ಕಾರಣರಾದ ಎಲ್ಲರನ್ನು ಅಭಿನಂದಿಸಿದರು.