ಕೇರಳದ ತುತ್ತ ತುದಿಯ ಜಿಲ್ಲೆ ಕಾಸರಗೋಡಿನಿಂದ 25 ಕಿ.ಮೀ. ದೂರದಲ್ಲಿ ನೆಲೆನಿಂತಿದೆ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಜಿಬೈಲು. ಇದು ಮಿಂಜ ಗ್ರಾಮ ಪಂಚಾಯತಿನ ಮಜಿಬೈಲು ಗ್ರಾಮದಲ್ಲಿ ಕಾರ್ಯವೆಸಗುತ್ತಿದೆ. ಈಗಿನ ಶಾಲಾ ಕಟ್ಟಡವು 18/12/1972ಕ್ಕೆ ರೂಪುಗೊಂಡಿತ್ತು. ಆಕಸ್ಮಿಕವಾಗಿ ಬೆಂಕಿ ತಗುಲಿ ಮೊದಲಿದ್ದ ಶಾಲೆ ಸುಟ್ಟು ಬೂದಿಯಾಯಿತು. ನಂತರ ಹಲವಾರು ಸಂಘ ಸಂಸ್ಥೆಗಳ ಹಾಗೂ ಊರವರ ನೆರವಿನಿಂದ ಈಗಿನ ಶಾಲೆ ಅಸ್ತಿತ್ವಕ್ಕೆ ಬಂತು. ಆರಂಭದ ಕಾಲಘಟ್ಟದಲ್ಲಿ ಕನ್ನಡ, ಮಲಯಾಳ , ಅರಾಬಿಕ್ ಇದ್ದರೂ ಅಧ್ಯಾಪಕರ ಕೊರತೆಯಿಂದ 2002ರಿಂದ ಮಲಯಾಳಕ್ಕೆ ದಾಖಲಾತಿ ಆಗಲಿಲ್ಲ. ಸದ್ಯ ಕನ್ನಡ ಮಾಧ್ಯಮದಲ್ಲಿ ಮಕ್ಕಳ ವಿದ್ಯಾಭ್ಯಾಸ ನಡೆಯುತ್ತಿದೆ. ಒಟ್ಟು 2.01ಎಕರೆಗಳ ಸ್ಥಳ ವಿಸ್ತೀರ್ಣ ಹೊಂದಿದ್ದು ಮಕ್ಕಳ ಕಲಿಕೆಗೆ ಯೋಗ್ಯವಾಗಿದೆ.
HEADMASTER
No comments:
Post a Comment