WELCOME TO GLPS MAJIBAIL

10 Sept 2017

ಓಣಂ ಆಚರಣೆ  

ಪಿ.ಟಿ.ಎ. ಅಧ್ಯಕ್ಷೆ  ಗೀತಾ ದೀಪ ಬೆಳಗಿಸಿ ಉದ್ಘಾಟಿಸಿದರು. ಶಾಲಾ ಮುಖ್ಯೋಪಾದ್ಯಾಯ ಜೈಶಂಕರ ವಿ.ಜಿ. ಎಲ್ಲರನ್ನು ಸ್ವಾಗತಿಸಿದರು. ಹೂವಿನ  ರಂಗೋಲಿ  ಹಾಕಿ ಮಹಾಬಲಿ,ವಾಮನ ಸಮೇತ  ಮೆರವಣಿಗೆ ನಡೆಸಲಾಯಿತು. ಹೆತ್ತವರು, ಊರವರೆಲ್ಲ ಸೇರಿ ತಯಾರಿಸಿದ  ಓಣಂ   ಊಟದ ನಂತರ ವಿವಿಧ ಸ್ಪಧೆ್ ನಡೆಸಿ ಬಹುಮಾನ ವಿತರಿಸಲಾಯಿತು.






20 Aug 2017

ಸ್ವಾತಂತ್ರ್ಯ  ದಿನಾಚರಣೆ 
ಗ್ರಾಮ ಸದಸ್ಯರಾದ  ಶಾಂತಾರಾಮ  ಶೆಟ್ಟಿ ಧ್ವಜಾರೋಹಣ  ಮಾಡಿದರು . ಪಿ.ಟಿ. ಎ  ಅಧ್ಯಕ್ಷೆ  ಗೀತಾ  ಸಭಾ ಕಾರ್ಯಕ್ರಮದ ಅಧ್ಯಕ್ಷ ತೆ  ವಹಿಸಿದರು .ಯಂ ಪಿ.ಟಿ . ಅಧ್ಯಕ್ಷೆ  ನಿರ್ಮಲ  ಉಪಾಧ್ಯಕ್ಷೆ  ಸುಜಾತ , ಹಳೆ ವಿದ್ಯಾರ್ಥಿ  ಸoಘ ಟ ನೆಯ  ಅಧ್ಯಕ್ಷ  ಹರೀಶ  ನಾಯ್ಕ್  ಉಪಸ್ಥಿತರಿದ್ದರು . 







31 Jul 2017

                                     ಶಾಲೆಗೆ  ಆಗಮಿಸಿದ   ಆಟಿಕಳಂಜ






9 Jul 2017




                               ಸುರೇಶ ಬಂಗೇರ ಮುಖ್ಯ ಶಿಕ್ಷಕರಾಗಿ ಭಡ್ತಿ

 ನಮ್ಮ ಶಾಲಾ ಶಿಕ್ಷಕ ಸುರೇಶ ಬಂಗೇರ ಅವರು ಉದ್ಯೋಗದಲ್ಲಿ ಭಡ್ತಿ ಪಡೆದು ಮುಖ್ಯ ಶಿಕ್ಷಕರಾಗಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಾತೂರು ಶಾಲೆಯಲ್ಲಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದರು. ಶ್ರೀಯುತರಿಗೆ ನಮ್ಮ ಶಾಲಾ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.








ಮಜಿಬೈಲು ಶಾಲೆಯಲ್ಲಿ ಚುನಾವಣೆ


ಪ್ರಜಾಪ್ರಭುತ್ವವನ್ನು ಪ್ರತಿಬಿಂಬಿಸುವ ಮಾದರಿಯಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಜಿಬೈಲಿನಲ್ಲಿ  ಚುನಾವಣೆ ನಡೆಯಿತು.ಶಾಲಾ ಮುಖ್ಯೋಪಾಧ್ಯಾಯರಾದ  ಶ್ರೀಯುತ ಜೈ ಶಂಕರ ವಿ, ಜಿ. ಚುನಾವಣೆಯ ಮಾಹಿತಿ ತಿಳಿಸಿದರು.ಹಿರಿಯ ಅಧ್ಯಾಪಕ ಸುರೇಶ ಬಂಗೇರ  ಚುನಾವಣೆಯ ವಿವಧ ಹಂತಗಳನ್ನು ಪರಿಚಯಿಸಿದರು.ಪ್ರಸ್ತುತ ವರ್ಷದ ಶಾಲಾ ನಾಯಕನಾಗಿ  ಪೆಲ್ಶನ್ ಡಿ ಸೋಜ ನು ಆಯ್ಕೆಗೊಂಡನು, ಶಾಲಾಶಿಕ್ಷಕಿ ಸೀಮಸುವರ್ಣ ಮತ್ತು  ಚಿತ್ರಾವತಿ  ಉಪಸ್ಥಿತರಿದ್ದರು.











                                        ಮಜಿಬೈಲು ಶಾಲೆಯ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ
ಮೀಯಪದವು: ಮಜಿಬೈಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಮಹಾಸಭೆಯು. ಪಿ.ಟಿ.ಎ. ಅಧ್ಯಕ್ಷರಾದ ಸುಂದರ ಕೊಡ್ಡೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.
ಪಿ,ಟಿ.ಅ. ಅಧ್ಯಕ್ಷೆಯಾಗಿ ಗೀತಾ ಹಾಗೂ ಉಪಾಧ್ಯಕ್ಷೆಯಗಿ ಸುಶೀಲ ಯಂ.ಪಿಟಿ.ಅಧ್ಯಕ್ಷೆಯಾಗಿ ನಿರ್ಮಲ ಮತ್ತು ಉಪಾಧ್ಯಕ್ಷೆಯಾಗಿ ಸುಜಾತರವರನ್ನು  ಆರಿಸಲಾಯಿತು.ಈ ಸಂದರ್ಭದಲ್ಲಿ ವಾಚನಾವಾರಾಚಣೆಯ ಅಂಗವಾಗಿ ಏರ್ಪಡಿಸಿದ ಸ್ಪರ್ಧೆಗಳಲ್ಲಿ  ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಮುಖ್ಯ ಶಿಕ್ಷಕರಾಗಿ ಭಡ್ತಿ ಹೊಂದಿದ ನಮ್ಮೀ ಶಾಲೆಯ ಹಿರಿಯ ಶಿಕ್ಷಕರಾದ ಸುರೇಶ ಬಂಗೇರರನ್ನು ಈಸಂದರ್ಭದಲ್ಲಿ ಅಭಿನಂದಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಜೈಶಂಕರ ವಿ.ಜಿ.ಸ್ವಾಗತಿಸಿದರು. ಚಿತ್ರಾವತಿ ಚಿಗುರುಪಾದೆ ವರದಿ ವಾಚಿಸಿದರು.ಶಿಕ್ಷಕಿ ಸೀಮಾಸುವರ್ಣ ವಂದಿಸಿದರು.





21 Jun 2017

ವಿಶ್ವ ಯೋಗ ದಿನಾಚರಣೆ



          .  



 
 ಶಾಲಾ ಮುಖ್ಯೋಪಾಧ್ಯಾಯರಾದ ಜೈಶಂಕರ.ವಿ.ಜಿ. ಯವರ ನೇತೃತ್ವದಲ್ಲಿ ವಿಶ್ವ ಯೋಗ ದಿನಾಚರಣೆ  ನಮ್ಮ ವಿದ್ಯಾ ಸಂಸ್ಥೆಯಲ್ಲಿ ಆಚರಿಸಲಾಯಿತು.  .

19 Jun 2017

ವಾಚನಾವಾರಾಚರಣೆ 






ಮಜಿಬೈಲು  ಗ್ರಾಮ  ಪಂಚಾಯತ್ ಸದಸ್ಯ ಶಾಂತಾರಾಮ ಶೆಟ್ಟಿ  ಉದ್ಘಾಟಿಸಿದರು.

5 Jun 2017

ವಿಶ್ವಪರಿಸರ ದಿನಾಚರಣೆ
ನಮ್ಮ ಶಾಲಾ ವಿಶ್ವಪರಿಸರ ದಿನಾಚರಣೆಯನ್ನು ಮುಖ್ಯೋಪಾಧ್ಯಾಯರಾದ ಶ್ರೀಯುತ ಜೈಶಂಕರ ವಿ,ಜಿ.ಸಸಿ ನೆಡುವ ಮೂಲಕ  ಉದ್ಘಾಟಿಸಿದರು.ಶಿಕ್ಷಕಿ ಚಿತ್ರಾವತಿ  ಪ್ರತಿಜ್ಞೆ ಹೇಳಿಸಿದರು. ಮಕ್ಕಳು ಘೋಷಣೆ ಕೂಗಿದರು. ಪಿ,ಟಿ.ಎ.ಸದಸ್ಯರು ಭಾಗವಹಿಸಿದ್ದರು. ಶಿಕ್ಷಕ ಸುರೇಶ ಬಂಗೇರ ಸ್ವಾಗತಿಸಿ, ಶಿಕ್ಷಕಿ  ಸೀಮಾ ಸುವರ್ಣ ವಂದಿಸಿದರು.






1 Jun 2017

ಉಚಿತ ಸಮವಸ್ತ್ರ ವಿತರಣೆ 
ಶಾಲಾ ಪ್ರವೇಶೋತ್ಸವ ೨೦೧೭-೨೦೧೮


 ಶಾಲಾಪ್ರವೇಶೋತ್ಸವವನ್ನು  ಗ್ರಾಮಸದಸ್ಯ  ಶಾಂತಾರಾಮ ಶೆಟ್ಟಿ ಉದ್ಘಾಟಿಸಿದರು .   ಯೆಸ್ ಯಸ್  ಜಿ  ಸದಸ್ಯ  ಬಾಬು   ಮತ್ತು  ಆಲಿ  ಶುಭಾಶಂಸನೆ  ನೀಡಿದರು.  ಆಲಿಯವರು ಶಾಲಾ ಮಕ್ಕಳಿಗೆ ಉಚಿತ ಕೊಡೆಯನ್ನು ನೀಡಿದರು  ನಂತರ  ಉಚಿತ ಸಮವಸ್ತ್ರ ಮತ್ತು ಕಿಟ್ ವಿತರಿಸಿ  ಸಿಹಿತಿಂಡಿ ವಿತರಿಸಲಾಯಿತು ಶಾಲಾ ಮುಖ್ಯೋಪಾಧ್ಯಾಯರಾದ  ಜೈಶಂಕರ್  ಸ್ವಾಗತಿಸಿದರು  ಶಾಲಾ ಶಿಕ್ಷಕಿ ಚಿತ್ರಾವತಿಯವರು ಪ್ರವೇಶೋತ್ಸವ ಗೀತೆಯನ್ನು ಹಾಡಿದರು ಸೀಮಾ ಸುವರ್ಣ  ಕಾರ್ಯಕ್ರಮ ನಿರೂಪಿಸಿದರು  ನಂತರ ಶಾಲಾ ಪರಿಸರದಲ್ಲಿ ಮೆರವಣಿಗೆ ನಡೆಸಲಾಯಿತು 

30 May 2017

ಶಾಲಾ ಪ್ರವೇಶೋತ್ಸವ ಪೂರ್ವ ಸಿದ್ಧತಾ ರಕ್ಷಕ ಶಿಕ್ಷಕ  ಸಮಿತಿ ಸಭೆ 



ನಮ್ಮ ಶಾಲಾ  ಪ್ರವೇಶೋತ್ಸವ ಪೂರ್ವ ಸಿದ್ಧತಾ ಚಟುವಟಿಕೆಗಳ ಸಮಾಲೋಚನೆಯು ದಿನಾಂಕ 27-5-2017 ನೇ ಗುರುವಾರ ನಡೆದ ಪಿ ಟಿ .ಎ ಸಭೆಯಲ್ಲಿ ಚರ್ಚಿಸಲಾಯಿತು . ಪಿ  ಟಿ  ಎ  ಅಧ್ಯಕ್ಷ  ಸುಂದರ ಕೊಡ್ದೆಯವರ ನೇತ್ರತ್ವದಲ್ಲಿ ಸಭೆ  ಜರಗಿತು . 


15 Mar 2017

ಶಾಲಾ ವಿಕಸನ ಸಮಿತಿ ಸಭೆ 


ನಮ್ಮ ಶಾಲೆಯಲ್ಲಿ ನಡೆದ  ಶಾಲಾ ವಿಕಸನ ಸಮಿತಿ  ಸಭೆಯಲ್ಲಿ ವಾರ್ಡು ಸದಸ್ಯರು , ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ರಕ್ಷಕ ಶಿಕ್ಷಕ  ಸಂಘದ ಅಧ್ಯಕ್ಷರು , ಮಾತೃ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು ಭಾಗವಹಿಸಿದ್ದು , ಐದು ವರ್ಷಗಳ ಶಾಲಾಭಿವೃದ್ಧಿ ಯೋಜನೆಯನ್ನು ಅಂಗೀಕರಿಸಲಾಯಿತು. 



12 Mar 2017

ಹಳೆವಿದ್ಯಾರ್ಥಿ ಸಂಗಮ  ಮತ್ತು  ಸೆಮಿನಾರು 




ನಮ್ಮ ಶಾಲೆಯಲ್ಲಿ ನಡೆದ ಹಳೆ ವಿದ್ಯಾರ್ಥಿ ಸಂಗಮ  ಸಭೆ . ಈ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಳೆ ವಿದ್ಯಾರ್ಥಿಗಳು ಹಾಜರಿದ್ದು ನೂತನ ಕಾರ್ಯಕಾರಿ ಸಮಿತಿ ರಚಿಸಲಾಯಿತು. 


4 Feb 2017

ಶಾಲಾ ಪ್ರವಾಸ 



ನಮ್ಮ ಶಾಲೆಯಿಂದ  ಪಿಲಿಕುಳ , ನಂದಿನಿ ಡೈರಿ , ಮ್ಯೂಸಿಯಮ್  , ಉಳ್ಳಾಲ ಬೀಚ್ , ಮೊದಲಾದ ಸ್ಥಳಗಳಿಗೆ ಶಾಲಾ ರಕ್ಷಕ ಶಿಕ್ಷಕ ಸಂಘದ ವತಿಯಿಂದ ಶೈಕ್ಷಣಿಕ  ಪ್ರವಾಸ ನಡೆಸಲಾಯಿತು.