WELCOME TO GLPS MAJIBAIL

31 Jul 2017

                                     ಶಾಲೆಗೆ  ಆಗಮಿಸಿದ   ಆಟಿಕಳಂಜ


9 Jul 2017
                               ಸುರೇಶ ಬಂಗೇರ ಮುಖ್ಯ ಶಿಕ್ಷಕರಾಗಿ ಭಡ್ತಿ

 ನಮ್ಮ ಶಾಲಾ ಶಿಕ್ಷಕ ಸುರೇಶ ಬಂಗೇರ ಅವರು ಉದ್ಯೋಗದಲ್ಲಿ ಭಡ್ತಿ ಪಡೆದು ಮುಖ್ಯ ಶಿಕ್ಷಕರಾಗಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಾತೂರು ಶಾಲೆಯಲ್ಲಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದರು. ಶ್ರೀಯುತರಿಗೆ ನಮ್ಮ ಶಾಲಾ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಮಜಿಬೈಲು ಶಾಲೆಯಲ್ಲಿ ಚುನಾವಣೆ


ಪ್ರಜಾಪ್ರಭುತ್ವವನ್ನು ಪ್ರತಿಬಿಂಬಿಸುವ ಮಾದರಿಯಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಜಿಬೈಲಿನಲ್ಲಿ  ಚುನಾವಣೆ ನಡೆಯಿತು.ಶಾಲಾ ಮುಖ್ಯೋಪಾಧ್ಯಾಯರಾದ  ಶ್ರೀಯುತ ಜೈ ಶಂಕರ ವಿ, ಜಿ. ಚುನಾವಣೆಯ ಮಾಹಿತಿ ತಿಳಿಸಿದರು.ಹಿರಿಯ ಅಧ್ಯಾಪಕ ಸುರೇಶ ಬಂಗೇರ  ಚುನಾವಣೆಯ ವಿವಧ ಹಂತಗಳನ್ನು ಪರಿಚಯಿಸಿದರು.ಪ್ರಸ್ತುತ ವರ್ಷದ ಶಾಲಾ ನಾಯಕನಾಗಿ  ಪೆಲ್ಶನ್ ಡಿ ಸೋಜ ನು ಆಯ್ಕೆಗೊಂಡನು, ಶಾಲಾಶಿಕ್ಷಕಿ ಸೀಮಸುವರ್ಣ ಮತ್ತು  ಚಿತ್ರಾವತಿ  ಉಪಸ್ಥಿತರಿದ್ದರು.                                        ಮಜಿಬೈಲು ಶಾಲೆಯ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ
ಮೀಯಪದವು: ಮಜಿಬೈಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಮಹಾಸಭೆಯು. ಪಿ.ಟಿ.ಎ. ಅಧ್ಯಕ್ಷರಾದ ಸುಂದರ ಕೊಡ್ಡೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.
ಪಿ,ಟಿ.ಅ. ಅಧ್ಯಕ್ಷೆಯಾಗಿ ಗೀತಾ ಹಾಗೂ ಉಪಾಧ್ಯಕ್ಷೆಯಗಿ ಸುಶೀಲ ಯಂ.ಪಿಟಿ.ಅಧ್ಯಕ್ಷೆಯಾಗಿ ನಿರ್ಮಲ ಮತ್ತು ಉಪಾಧ್ಯಕ್ಷೆಯಾಗಿ ಸುಜಾತರವರನ್ನು  ಆರಿಸಲಾಯಿತು.ಈ ಸಂದರ್ಭದಲ್ಲಿ ವಾಚನಾವಾರಾಚಣೆಯ ಅಂಗವಾಗಿ ಏರ್ಪಡಿಸಿದ ಸ್ಪರ್ಧೆಗಳಲ್ಲಿ  ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಮುಖ್ಯ ಶಿಕ್ಷಕರಾಗಿ ಭಡ್ತಿ ಹೊಂದಿದ ನಮ್ಮೀ ಶಾಲೆಯ ಹಿರಿಯ ಶಿಕ್ಷಕರಾದ ಸುರೇಶ ಬಂಗೇರರನ್ನು ಈಸಂದರ್ಭದಲ್ಲಿ ಅಭಿನಂದಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಜೈಶಂಕರ ವಿ.ಜಿ.ಸ್ವಾಗತಿಸಿದರು. ಚಿತ್ರಾವತಿ ಚಿಗುರುಪಾದೆ ವರದಿ ವಾಚಿಸಿದರು.ಶಿಕ್ಷಕಿ ಸೀಮಾಸುವರ್ಣ ವಂದಿಸಿದರು.