WELCOME TO GLPS MAJIBAIL

20 Jun 2022

ವಾಚನಾ ವಾರಾಚರಣೆ

 ವಾಚನಾ ವಾರಾಚರಣೆ

ಪಿ.ಯನ್ ಪಣಿಕ್ಕರ್ ಅವರ  ಚರಮ ದಿನದ ಪ್ರಯುಕ್ತ ಜೂನ್ 19ರಿಂದ ಒಂದು ವಾರಗಳ ಕಾಲ ನಮ್ಮ ಶಾಲೆಯಲ್ಲಿ ವಾಚನಾ ವಾರಾಚರಣೆಯನ್ನು ಆಚರಿಸಲಾಯಿತು. ಮಕ್ಕಳೆಲ್ಲರಿಗೂ ಒಂದೊಂದು ಪುಸ್ತಕಗಳನ್ನು ಓದಿ ಓದಿನ ಟಿಪ್ಪಣಿಯನ್ನು ಬರೆಯಲು ಸೂಚಿಸಲಾಯಿತು. ಎಲ್ಲ ಮಕ್ಕಳು ಕೂಡ ಪುಸ್ತಕಗಳನ್ನು ಓದಿ, ಓದಿನ ಟಿಪ್ಪಣಿ ತಯಾರಿಸಿದರು. ಮಕ್ಕಳ ಬರೆದ ಓದಿನ ಟಿಪ್ಪಣಿಗಳನ್ನು ಸೇರಿಸಿ ಪುಸ್ತಕ ತಯಾರಿಸಲಾಯಿತು.  ಮಕ್ಕಳಿಗಾಗಿ ತರಗತಿ ಮಟ್ಟದಲ್ಲಿ ಒಗಟು ಸ್ಪರ್ಧೆ, ಗಾದೆ ಸ್ಪರ್ಧೆ ಮತ್ತು ಕಥೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಎಲ್ಲಾ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ನೀಡಲಾಯಿತು.

No comments:

Post a Comment