WELCOME TO GLPS MAJIBAIL

19 Jul 2022

ಶಾಲಾ ಪಾರ್ಲಿಮೆಂಟ್ ಚುನಾವಣೆ

 ಜಿ. ಎಲ್.ಪಿ ಶಾಲೆ ಮಜಿಬೈಲಿನಲ್ಲಿ 19-07-2022ನೇ ಮಂಗಳವಾರದಂದು ಶಾಲಾ ಪಾರ್ಲಿಮೆಂಟ್ ಚುನಾವಣೆ ನಡೆಯಿತು. ಪೌರ ಮತದಾನದ ಎಲ್ಲಾ ಹಂತಗಳನ್ನು ಪರಿಚಯಿಸುವ ರೀತಿಯಲ್ಲಿ ಶಾಲಾ ಪಾರ್ಲಿಮೆಂಟ್ ಚುನಾವಣೆ ನಡೆಯಿತು. ನಿನ್ನೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಮೂರನೇ ತರಗತಿಯ ಮೊಹಮ್ಮದ್ ರಿಫಾನ್ ,ನಾಲ್ಕನೇ ತರಗತಿಯ ಆಯಿಷತ್ ರಮ್ಲ, ಮೊಹಮ್ಮದ್ ಫಾಸಿಲ್, ಹಸನ್ ಅರ್ಫಾಝ್, ಪ್ರಿನ್ಸಿಯಾ ಡಿ ಸೋಜ ಶಾಲಾ ಪಾರ್ಲಿಮೆಂಟ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ಎಲ್ಲಾ ಅಭ್ಯರ್ಥಿಗಳು ಪ್ರತೀ ತರಗತಿಗೂ ಭೇಟಿ ನೀಡಿ ಮತಯಾಚಿಸಿದರು.

ಶಾಲಾ ಪಾರ್ಲಿಮೆಂಟ್ ಚುನಾವಣಾ ಫಲಿತಾಂಶ

ಶಾಲಾ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳುಇಂದು ನಡೆದ ಶಾಲಾ ಪಾರ್ಲಿಮೆಂಟ್ ಚುನಾವಣೆಯಲ್ಲಿ ವಿಜಯಿಯಾದವರು: ಶಾಲಾ ನಾಯಕಿ. : ಪ್ರಿ ನ್ಸಿಯಾ ಡಿ ಸೋಜ ಆರೋಗ್ಯ ಮಂತ್ರಿ : ಆಯಿಷತ್ ರಮ್ಲ ಕ್ರೀಡಾ ಮಂತ್ರಿ : ಹಸನ್ ಅರ್ಫಾಝ್ ಶಾಲಾ ಶಿಸ್ತು ಮಂತ್ರಿ. : ಮೊಹಮ್ಮದ್ ಫಾಸಿಲ್ ಕ್ಲಬ್ ಚಟುವಟಿಗಳ ಮಂತ್ರಿ: ಮೊಹಮ್ಮದ್ ರಿಫಾನ್ _🎉🎉Congratulations to winners_ 🎉🎉
No comments:

Post a Comment